News

ಉಡುಪಿ : ಕುಕ್ಕಿಕಟ್ಟೆ ಬೂತ್ ನಲ್ಲಿ ನಟ ರಕ್ಷಿತ್ ಶೆಟ್ಟಿ ಮತದಾನದ ಹಕ್ಕು ಚಲಾವಣೆ

ಉಡುಪಿ, ಏ 18(Daijiworld News/MSP): ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದೆ. ಎಲ್ಲೆಡೆ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ. ಅಂತೆಯೇ ಸ್ಯಾಂಡಲ್ ವುಡ್ ನ ಖ್ಯಾತ ನಟ ರಕ್ಷಿತ್ ಶೆಟ್ಟಿ ಕೂಡಾ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ.

ಉಡುಪಿಯ ಕುಕ್ಕಿಕಟ್ಟೆ ಶಾಲೆಗೆ ಬಂದು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ.ಆ ಬಳಿಕ ಮಾತನಾಡಿದ ನಟ ರಕ್ಷಿತ್ ಶೆಟ್ಟಿ ಪ್ರಜಾಪ್ರಭುತ್ವದಲ್ಲಿ ಹಬ್ಬದಲ್ಲಿ ಭಾಗವಹಿಸಿ ಖುಷಿ ತಂದಿದೆ. ನಾನೂ ಮತದಾನ ಮಾಡಿ ನನ್ನ ಹಕ್ಕು ಚಲಾಯಿಸಿದ್ದೇನೆ ಎಂದರು.

ಬೆಂಗಳೂರಿನಲ್ಲಿರುವ ನೆಲೆಸಿರುವ ರಕ್ಷಿತ್ ಮತದಾನಕ್ಕಾಗಿ ಹುಟ್ಟೂರಿಗೆ ಆಗಮಿಸಿದ್ದರು.