News

ಶಿರೂರು ಶ್ರೀ ಸಾವಿನ ಹೊಸ ವದಂತಿ -ಮಠದಲ್ಲಿ ಸಿಕ್ಕ ಬಾಟಲಿಯಲ್ಲಿ ವಿಷವಿತ್ತು ಎನ್ನುವ ಸುದ್ದಿ ವೈರಲ್

ಉಡುಪಿ, ಜು 22: ಶಿರೂರು ಶ್ರೀಗಳ ಸಾವಿನ ಕುರಿತು ನಾನಾ ರೀತಿಯ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದಕ್ಕೀಗ ಹೊಸ ಸೇರ್ಪಡೆಯಾಗಿ ಶಿರೂರು ಮೂಲ ಮಠದಲ್ಲಿ ಬಾಟಲಿ ಸಿಕ್ಕತೆಂಬ ಸುದ್ದಿ.

ಶಿರೂರಿನ ಮೂಲ ಮಠದಲ್ಲಿ ಒಂದು ಬಾಟಲಿ ಸಿಕ್ಕಿದ್ದು, ಆ ಬಾಟಲಿಯಲ್ಲಿ ವಿಷವಿತ್ತು ಎಂಬ ವದಂತಿ ಈಗ ಎಲ್ಲೆಡೆ ಹರಿದಾಡುತ್ತಿದೆ. Morinzhi ಹೆಸರಿನ ಡ್ರಿಂಕ್ ಬಾಟಲಿ ಸಿಕ್ಕಿದ್ದು ಇದನ್ನು ಸ್ವಾಮೀಜಿಗಳಿಗೆ ಮಹಿಳೆಯೊಬ್ಬಳು ನೀಡುತ್ತಿದ್ದಳು ಎಂದು ಹೇಳಲಾಗುತ್ತಿದೆ. ಆದರೆ ನಿಜಕ್ಕೂ Morinzhi ಹೆಸರಿನ ಆರೋಗ್ಯ ವೃದ್ಧಿ ಪಾನೀಯವೊಂದು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ವಿಚಾರ ಕೇವಲ ವದಂತಿಯೇ ಅಥವಾ ನಿಜಕ್ಕೂ ಬಾಟಲಿಯಲ್ಲಿ ವಿಷವಿತ್ತೇ ಎನ್ನುವುದು ಪೊಲೀಸರ ತನಿಖೆಯಿಂದಷ್ಟೇ ತಿಳಿದುಬರಲಿದೆ.