News

ಮಂಗಳೂರು: ಚಲಿಸುತ್ತಿದ್ದ ಇಂಡಿಕಾ ಕಾರಿಗೆ ಬೆಂಕಿ

ಮಂಗಳೂರು, ಮೇ 17 : ನಗರದ ಜ್ಯೋತಿ ಸರ್ಕಲ್ ಬಳಿ ಮೇ 17 ರ ಗುರುವಾರ ಮುಂಜಾನೆ ಇಂಡಿಕಾ ಕಾರಿಗೆ ಬೆಂಕಿ ತಗುಲಿ ಕೆಲ ಕಾಲ ಆತಂಕ ಸೃಷ್ಟಿಯಾದ ಘಟನೆ ನಡೆಯಿತು. ಬೆಂದೂರುವೆಲ್ ನಿವಾಸಿ ಒಲಿವೆರಾ ಮಸ್ಕರೇನ್ಹಸ್ ಎಂಬವರಿಗೆ ಸೇರಿದ ಇಂಡಿಕಾ ಕಾರನ್ನು ಜ್ಯೋತಿ ಸರ್ಕಲ್ ಬಳಿ ಚಲಾಯಿಸಿಕೊಂಡು ಬರುತ್ತಿದ್ದರು. ಈ ಸಂದರ್ಭದಲ್ಲಿ ಕಾರಿನ ಬಾನೆಟ್‌ನಲ್ಲಿ ಹೊಗೆ ಬರುತ್ತಿರುವುದನ್ನು ಕಂಡು ನಿಲ್ಲಿಸಿದ್ದಾರೆ. ತಕ್ಷಣ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ತಿಳಿಸಿದ್ದಾರೆ. ಅವರು ಬರುವಷ್ಟರಲ್ಲಿ ಕಾರಿನ ಮುಂಭಾಗದಲ್ಲಿ ಬೆಂಕಿ ಹಿಡಿದಿದು ಸಂಪೂರ್ಣ ನಾಶವಾಗಿದೆ.

 

ಶಾರ್ಟ್ ಸರ್ಕ್ಯೂಟ್‌ನಿಂದ ಇಲ್ಲವೇ ಪೆಟ್ರೋಲ್ ಲೀಕೇಜ್ ಇದ್ದ ಕಾರಣ ಬೆಂಕಿ ಹಿಡಿದಿರುವ ಸಾಧ್ಯತೆ ಇದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಗಿತಗೊಂಡಿದ್ದ ಸಂಚಾರವನ್ನು ಸುಗಮಗೊಳಿಸಿದರು.