News

ಊಹಿಸಲಾಗದಷ್ಟು ಬಹುಮತ ಸಾಬೀತು ಮಾಡುತ್ತೇವೆ - ಶ್ರೀರಾಮುಲು ವಿಶ್ವಾಸ

ಬೆಂಗಳೂರು, ಮೇ 17 : ಯಾರು ಊಹಿಸಲಾಗದಷ್ಟು ಬಹುಮತ ಸಾಬೀತು ಮಾಡುತ್ತೇವೆ ಎನ್ನುವ ವಿಶ್ವಾಸವನ್ನು , ಬಿ.ಶ್ರೀರಾಮುಲು ವ್ಯಕ್ತಪಡಿಸಿದರು. ಬಿಜೆಪಿ ಪಕ್ಷದ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾರೂ ಊಹಿಸಲಾಗದಷ್ಟು ಸಂಖ್ಯೆಯಲ್ಲಿ ಬಹುಮತ ಸಾಬೀತು ಮಾಡುತ್ತೇವೆ. ಕಾಂಗ್ರೆಸ್-ಜೆಡಿಎಸ್ ನಲ್ಲಿ ದೊಡ್ಡ ಸಂಖ್ಯೆಯ ಅಸಮಾಧಾನಿತರಿದ್ದಾರೆ ಅವರೆಲ್ಲರೂ ನಮ್ಮ ಜೊತೆ ಬರುತ್ತಾರೆ ಎನ್ನುವ ವಿಶ್ವಾಸವಿದೆ. ಕೆಲವು ಕಾಂಗ್ರೆಸ್-ಜೆಡಿಎಸ್ ನ ಅತೃಪ್ತ ಶಾಸಕರು ನಮ್ಮ ಪಕ್ಷದ ಜತೆ ಸಂಪರ್ಕದಲ್ಲಿದ್ದಾರೆ ಎಂದರು.