News

ರಾಜ್ಯ ಬಿಜೆಪಿ ನಾಯಕರುಗಳ ನಡೆ ಇನ್ನು ನಿಗೂಢ - ಕಾಂಗ್ರೆಸ್ ಗೆ ಅಧಿಕಾರದಾಹ- ಟೀಕಿಸಿದ ಬಿ.ಎಸ್ ವೈ

ಬೆಂಗಳೂರು, ಮೇ 15 : ಕಾಂಗ್ರೆಸ್ ದಯನೀಯ ಸೋಲು ಅನುಭವಿಸಿದ ಬಳಿಕವೂ ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವುದನ್ನು  ಖಂಡಿಸುತ್ತೇನೆ ಎಂದು ಬಿಜೆಪಿ ಪಕ್ಷದ ರಾಜ್ಯಾದ್ಯಾಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಬಿ.ಎಸ್ ಯಡಿಯೂರಪ್ಪ ರಾಜ್ಯದ ಜನತೆಗೆ ಅಭಿನಂದನೆ ಸಲ್ಲಿಸಿದರು. ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯ ಸೋಲು ಅನುಭವಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಜನತೆ ತಿರಸ್ಕರಿಸಿದ್ದಾರೆ ಎಂದರು. ಆದರೂ ಮೈತ್ರಿ ಬಗ್ಗೆ ಮಾತನಾಡದ ರಾಜ್ಯ ಬಿಜೆಪಿ ನಾಯಕರುಗಳ ನಡೆ ಇನ್ನು ನಿಗೂಡವಾಗಿಯೇ ಉಳಿದುಕೊಂಡಿದೆ.