News

ಬಿಜೆಪಿ 2 ನೇ ಪಟ್ಟಿ ಬಿಡುಗಡೆ, ಮೂಡುಬಿದಿರೆಯಿಂದ ಉಮನಾಥ್ ಕೋಟ್ಯಾನ್ ಕಣಕ್ಕೆ

ಮಂಗಳೂರು, ಏ 16: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯು ತನ್ನ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಏಪ್ರಿಲ್ 16 ರ ಸೋಮವಾರ ಬಿಡುಗಡೆಗೊಳಿಸಿದೆ. ಈ ಬಾರಿ 82 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡಿದೆ. ಈ ಹಿಂದೆ ಮೊದಲ ಪಟ್ಟಿಯಲ್ಲಿ 72 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಏಪ್ರಿಲ್ 8 ರಂದು ಪ್ರಕಟಿಸಿತ್ತು.
ಬೆಳ್ತಂಗಡಿ ಕ್ಷೇತ್ರ- ಹರೀಶ್ ಪೂಂಜಾ, ಬಂಟ್ವಾಳ - ರಾಜೇಶ್ ನಾಯಕ್, ಪುತ್ತೂರು- ಸಂಜೀವ್ ಮಠಂದೂರು , ಮೂಡುಬಿದಿರೆ - ಉಮನಾಥ್ ಕೋಟ್ಯಾನ್ ಇವರು ಪಕ್ಷದ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಉಳಿದಂತೆ ಅಭ್ಯರ್ಥಿಗಳ ವಿವರ ಈ ಕೆಳಗಿನಂತಿದೆ.