News

ಅಪರಾಧಿಯನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ – ಈ ಹೆಣ್ಣುಮಗಳಿಗೆ ನ್ಯಾಯ ದೊರತೇ ತೀರುವುದು – ಮೋದಿ ಟ್ವೀಟ್

ನವದೆಹಲಿ, ಏ 14: ಉತ್ತರ ಪ್ರದೇಶ ಉನ್ನಾವೋ ಹಾಗೂ ಜಮ್ಮು ಕಾಶ್ಮೀರದ ಕಥುವಾ ಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಸಮಾಜದಲ್ಲಿ ಸಾಮಾಜಿಕ ಮೌಲ್ಯ, ಕುಟುಂಬ ಸಂದರ್ಭಗಳನ್ನು ಬಲಪಡಿಸಬೇಕು. ಆದರೆ ಇಂತಹ ಕೆಟ್ಟ ಘಟನೆಗಳು ಮನಸ್ಸಿನ ಮನೋಬಲವನ್ನು ಕದಲಿಸುತ್ತದೆ. ಸಮಾಜದಲ್ಲಿ ಸಾಮಾಜಿಕ ಮೌಲ್ಯ, ಕುಟುಂಬ ಸಂದರ್ಭಗಳನ್ನು ಬಲಪಡಿಸಿದರೆ ಮಾತ್ರ ಅಂಬೇಡ್ಕರ್ ಅವರ ಕನಸಿನ ಭಾರತವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದ್ದಾರೆ.

ಈ ಘಟನೆಗಳು ನಾಗರಿಕ ಸಮಾಜವನ್ನು ನಾಚಿಕೆ ಪಡುವಂತೆ ಮಾಡುತ್ತಿದೆ. ದೇಶ ಕಟ್ಟಿದ ನಾಯಕರ ಮುಂದೆ ತಲೆ ತಗ್ಗಿಸಿ ನಿಲ್ಲುವಂತಾಗಿದೆ. ಯಾವುದೇ ಅಪರಾಧಿಯೂ ತಪ್ಪಿಸಿಕೊಳ್ಳಲು ಬಿಡುವುದಿಲ್ಲ. ನ್ಯಾಯ ದೊರೆತೇ ತೀರುವುದು. ಆ ಹೆಣ್ಣುಮಗಳಿಗೆ ಸಿಗಬೇಕಾದ ನ್ಯಾಯ ಸಲ್ಲುತ್ತದೆ. ಈ ಸಮಸ್ಯೆಯನ್ನು ನಾವೆಲ್ಲರೂ ಸೇರಿ ಬಗೆಹರಿಸಬೇಕಾಗಿದೆ ಎಂದು ತಿಳಿಸಿದ್ದಾರೆ.