News

ಗೋ ಮೂತ್ರ ಪವಿತ್ರವಾದರೆ ಅನಂತ ಕುಮಾರ ಹೆಗಡೆ ಅದನ್ನು ಕುಡಿಯಲಿ – ಪ್ರಕಾಶ್ ರೈ ವಿವಾದಾತ್ಮಕ ಹೇಳಿಕೆ

ವಿಜಯಪುರ, ಏ 12: ಗೋ ಮೂತ್ರದಿಂದ ಎಲ್ಲವೂ ಪವಿತ್ರವಾಗುವುದಾದರೆ ಅನಂತ ಕುಮಾರ್ ಗೋ ಮೂತ್ರ ಕುಡಿಯಲಿ ಎಂದು ನಟ ಪ್ರಕಾಶ್ ರೈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅನಂತ ಕುಮಾರ ಹೆಗಡೆ ವಿರುದ್ಧ ಕಿಡಿಕಾರಿದ ಅವರು, ಗೋಮೂತ್ರದಿಂದ ಎಲ್ಲವು ಪವಿತ್ರವಾಗುವುದಾದರೆ ಅನಂತ ಕುಮಾರ್ ಹಗಲು ಹೊತ್ತು ಒಂದು ಗ್ಲಾಸ್ ಮತ್ತು ರಾತ್ರಿ ಒಂದು ಗ್ಲಾಸ್ ಗೋ ಮೂತ್ರ ಕುಡಿಯಲಿ. ಮಾತ್ರವಲ್ಲ ತಮ್ಮ ಬಟ್ಟೆಗಳನ್ನೂ ಕೂಡ ಗೋ ಮೂತ್ರದಲ್ಲಿಯೇ ತೊಳೆಯಲಿ ಎಂದು ಹೇಳುವ ಮೂಲಕ ಮತ್ತೆ ವಿವಾದ ಸೃಷ್ಠಿಸಿದ್ದಾರೆ. 

ಅನಂತ್ ಕುಮಾರ್ ಹೆಗಡೆ ನನ್ನ ಅಪ್ಪ – ಅಮ್ಮನ ಕುರಿತು ಮಾತನಾಡಿದ್ದಾರೆ. ನನ್ನ ಅಪ್ಪ-ಅಮ್ಮನ ಕುರಿತು ಹೇಗೆ ಮಾತಾನಾಡಿದಿರಿ ನೀವು ಎಂದು ಪ್ರಶ್ನೆ ಮಾಡಿದ ಅವರು, ಅನಂತ ಕುಮಾರ್ ಹೆಗಡೆಗೆ ಧೈರ್ಯ ಇದ್ದರೆ ನನ್ನ ಎದುರು ಬರಲಿ ಎಂದು ಸವಾಲು ಹಾಕಿದ್ದಾರೆ.

ಇದೇ ವೇಳೆ ಪ್ರಕಾಶ್ ರೈ, ನಾನು ಹಿಂದೂ ವಿರೋಧಿ ಅಲ್ಲ. ನಾನು ಹಿಂದೂ ಧರ್ಮವನ್ನು ವಿರೋಧಿಸುವುದಿಲ್ಲ. ಧರ್ಮದ ಬಗ್ಗೆ ನಾನು ಮಾತಾಡುತ್ತಿಲ್ಲ. ಆದರೆ ರಾಕ್ಷಸರ ಬಗ್ಗೆ ನಾನು ಮಾತನಾಡುತ್ತೇನೆ. ಕೇವಲ ನಾನು ಅನಂತಕುಮಾರ್ ಹೆಗಡೆ ಮತ್ತು ಅಮಿತ್ ಶಾ ವಿರೋಧಿಯಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.