News

ಮಂಗಳೂರು : ಕಲ್ಲಡ್ಕ ಪ್ರಭಾಕರ್ ಭಟ್‌ ಅವರ ತಲೆ ಸರಿ ಇದೆಯೇ ?- ನಲಿಕೆ ಸಮಾಜದ ಪ್ರಶ್ನೆ

ಮಂಗಳೂರು, ಏ 11: ಕಲ್ಲಡ್ಕ ಪ್ರಭಾಕರ್ ಭಟ್‌ ಅವರು ’ಭೂತ ಕಟ್ಟುನಾಯಗ್ ಮಂಡೆ ಸರಿ ಇಜ್ಜಿ ’ (ಭೂತ ಕಟ್ಟುವವನಿಗೆ ತಲೆ ಸರಿ ಇಲ್ಲ ) ಎನ್ನುವ ಹೇಳಿಕೆ ನೀಡುವ ಮೂಲಕ ನಲಿಕೆ ಸಮಾಜದವರನ್ನು ನಿಂದಿಸಿದ್ದಾರೆ ಎಂದು ನಲಿಕೆಯವರ ಸಮಾಜ ಸೇವಾ ಸಂಘ ಆರೋಪಿಸಿದೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್. ಪ್ರಭಾಕರ್ ಶಾಂತಿಕೋಡಿ ಭೂತ ಕಟ್ಟುವವನಿಗೆ ತಲೆ ಸರಿ ಇಲ್ಲ ಎನ್ನುವ ಹೇಳಿಕೆ ನೀಡಿದ ಕಲ್ಲಡ್ಕ ಪ್ರಭಾಕರ್ ಭಟ್‌ ಅವರ ತಲೆ ಸರಿ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ದೈವ ನರ್ತಕರಿಗೆ ತಲೆ ಸರಿ ಇಲ್ಲ ಎಂದು ಹೇಳುವ ಮೂಲಕ ಭಟ್ಟರು ಮಾನಸಿಕರಂತೆ ಮಾತನಾಡುತ್ತಾ, ನಾಡಿನಾದ್ಯಂತ ಹಲವಾರು ಕೋಮು ಸಂಘರ್ಷಗಳಿಗೆ ಕಾರಣವಾಗಿ ಕ್ರಿಮಿನಲ್ ಕೇಸುಗಳನ್ನು ಹಾಕಿಸಿಕೊಂಡಿರುವರುವ ಓರ್ವ ಅಪ್ಪಟ ಕ್ರಿಮಿನಲ್, ಅವರಿಗೆ ದೈವ ನರ್ತಕರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ, ಕ್ರಿಮಿನಲ್ ಗಳಿಂದ ಪಾಠ ಕಲಿಯುವ ಅಗತ್ಯವೂ ದೈವ ನರ್ತಕ ಸಮುದಾಯಕ್ಕಿಲ್ಲ ಎಂದು ಎಚ್ಚರಿಸಿದರು.
ಕಲ್ಲಡ್ಕ ಪ್ರಭಾಕರ್ ಭಟ್ ಅವರ ಹೇಳಿಕೆಯಿಂದ ನಲಿಕೆಯವರ ಸಮಾಜಕ್ಕೆ ನೋವಾಗಿದೆ. ಇನ್ನು ಮುಂದಕ್ಕೆ ಈ ರೀತಿ ಹೇಳಿಕೆ ನೀಡಿದಲ್ಲಿ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು. ಈಗಾಗಲೇ ಕಲ್ಲಡ್ಕ ಭಟ್ ಹೇಳಿಕೆ ಸಂಬಂಧಿಸಿದಂತೆ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದೇವೆ ಎಂದು ತಿಳಿಸಿದರು.