News

ಬೆಂಗಳೂರು ಒಂದರಲ್ಲೇ 1,172 ಸೋಂಕು ದೃಢ, ರಾಜ್ಯದಲ್ಲಿ 1,839 ಕೊರೊನಾ ಪಾಸಿಟಿವ್ - 42 ಮಂದಿ ಮೃತ್ಯು

ಬೆಂಗಳೂರು, ಜು. 04 (DaijiworldNews/MB) : ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಲ್ಲೇ ಇದ್ದು ಶನಿವಾರ ಒಂದೇ ದಿನ 42 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 335ಕ್ಕೇರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 1839 ಮಂದಿಗೆ ಸೋಂಕು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 21549 ಕ್ಕೆ ಏರಿಕೆಯಾಗಿದೆ.

ಇನ್ನು ಮೃತ ಪಟ್ಟ 42 ಮಂದಿ ಪೈಕಿ 24 ಸಾವು ಬೆಂಗಳೂರಿನಲ್ಲೇ ಆಗಿದ್ದು ಬೆಂಗಳೂರು ನಗರವೊಂದರಲ್ಲೆ 1172 ಪ್ರಕರಣಗಳು ದೃಢಪಟ್ಟಿದೆ.

ದಕ್ಷಿಣ ಕನ್ನಡದಲ್ಲಿ 75, ಬಳ್ಳಾರಿಯಲ್ಲಿ 73, ಬೀದರ್‌ನಲ್ಲಿ 51, ಧಾರವಾಡದಲ್ಲಿ 45, ರಾಯಚೂರಿನಲ್ಲಿ 41, ಮೈಸೂರಿನಲ್ಲಿ 38, ಕಲಬುರಗಿ, ವಿಜಯಪುರದಲ್ಲಿ ತಲಾ 37, ಮಂಡ್ಯ, ಉತ್ತರಕನ್ನಡದಲ್ಲಿ ತಲಾ 35, ಶಿವಮೊಗ್ಗದಲ್ಲಿ 31, ಹಾವೇರಿಯಲ್ಲಿ 28, ಬೆಳಗಾವಿಯಲ್ಲಿ 27, ಹಾಸನದಲ್ಲಿ 25, ಉಡುಪಿಯಲ್ಲಿ 18, ಚಿಕ್ಕಬಳ್ಳಾಪುರ, ತುಮಕೂರಿನಲ್ಲಿ ತಲಾ 12, ಬೆಂಗಳೂರು ಗ್ರಾಮಾಂತರ, ಕೋಲಾರದಲ್ಲಿ ತಲಾ 11, ದಾವಣಗೆರೆಯಲ್ಲಿ 7, ಚಾಮರಾಜನಗರದಲ್ಲಿ 5, ಗದಗದಲ್ಲಿ 4, ಕೊಪ್ಪಳ, ಚಿಕ್ಕಮಗಳೂರಿನಲ್ಲಿ 3, ರಾಮನಗರದಲ್ಲಿ2, ಯಾದಗಿರಿಯಲ್ಲಿ ಒಬ್ಬರಿಗೆ ಕೊರೊನಾ ಪ್ರಕರಣಗಳು ದೃಢಪಟ್ಟಿದೆ.

ಇನ್ನು ಏತನ್ಮಧ್ಯೆ ಕೊರೊನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯು ಏರಿಕೆಯಾಗುತ್ತಿದ್ದು ಶುಕ್ರವಾರ 439 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು 9,244 ಮಂದಿ ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಒಟ್ಟು 11,966 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 226 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.