News

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ಸಂಪೂರ್ಣ ಲಾಕ್‌ಡೌನ್‌ - ಡಿಸಿ ಆದೇಶ

ಮಂಗಳೂರು, ಜು. 04 (DaijiworldNews/MB) : ಕೊರೊನಾ ಸೋಂಕು ಅಧಿಕವಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಜುಲೈ 5 ರ ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯೂ ಸಂಪೂರ್ಣ ಲಾಕ್‌ಡೌನ್‌ ಆಗಲಿದೆ.

ಜಿಲ್ಲೆಯಲ್ಲಿ ನಾಳೆ ಹಾಲು, ದಿನಪತ್ರಿಕೆ, ಮೆಡಿಕಲ್,ಆಸ್ಪತ್ರೆ ಹೊರತುಪಡಿಸಿ ಎಲ್ಲಾ ಬಂದ್ ಆಗಲಿದೆ. ತರಕಾರಿ, ಮಾಂಸ, ಮೀನು ಮಾರಾಟ ಬಂದ್‌ ಆಗಲಿದೆ.

ಬಸ್‌ ಸೇವೆ ಕೂಡಾ ನಾಳೆ ಇರುವುದಿಲ್ಲ. ಹಾಗೆಯೇ ಖಾಸಗಿ ವಾಹನ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ. ಜನರ ಓಡಾಟಕ್ಕೂ ನಿಷೇಧ ಹೇರಲಾಗಿದೆ.