News

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಮತ್ತೆ 75 ಮಂದಿಗೆ ಕೊರೊನಾ ಪಾಸಿಟಿವ್‌

ಮಂಗಳೂರು, ಜು. 04 (DaijiworldNews/MB) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ತನ್ನ ಅಟ್ಟಹಾಸ ಮುಂದುವರಿಸಿದ್ದು ಶುಕ್ರವಾರವಷ್ಟೇ ಸಾವಿರದ ಗಡಿಯನ್ನು ದಾಟಿದೆ. ಶನಿವಾರ ಮತ್ತೆ 75 ಜನರಿಗೆ ಕೊರೊನಾ ಸೋಕು ಇರುವುದು ದೃಢಪಟ್ಟಿದೆ.

ಈ ಪೈಕಿ 11 ಮಂದಿ ಅಬುಧಾಬಿ, ಮಸ್ಕತ್‌, ದುಬೈನಿಂದ ಆಗಮಿಸಿದವರಾಗಿದ್ದು 29 ಮಂದಿ ಐಎಲ್‌ಐ ಹಾಗೂ 6 ಎಸ್‌ಎಆಐ ಪ್ರಕರಣವಾಗಿದೆ. 24 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಬಂದಿದ್ದರೆ ಒಬ್ಬರಿಗೆ ದ್ವಿತೀಯ ಸಂಪರ್ಕದಿಂದ ಕೊರೊನಾ ಸೋಂಕು ತಗುಲಿದೆ.

ಜಿಲ್ಲೆಯಲ್ಲಿ ಈವರೆಗೆ 1095 ಮಂದಿಗೆ ಸೋಂಕು ತಗುಲಿದ್ದು ಈ ಪೈಕಿ 10 ಜನ ಸೋಂಕಿತರು ಹೊರ ಜಿಲ್ಲೆಯವರಾಗಿದ್ದಾರೆ.

ಇಂದು ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೂವರು ಬಲಿಯಾಗಿದ್ದು ಮೃತರ ಸಂಖ್ಯೆ 22 ಕ್ಕೆ ಏರಿಕೆಯಾಗಿದೆ.

ಇನ್ನು ಜಿಲ್ಲೆಯಲ್ಲಿ ಇಂದು 13 ಮಂದಿ ಗುಣಮುಖರಾಗಿದ್ದು ಈವರೆಗೆ ಒಟ್ಟು 516 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 557 ಪ್ರಕರಣಗಳು ಸಕ್ರಿಯವಾಗಿದೆ.