News

'ಕುಣಿಯೋಕೆ ಬಾರದವರು ನೆಲಡೊಂಕು ಎಂದರು' - ಸಿದ್ಧರಾಮಯ್ಯ ವಿರುದ್ಧ ರಾಮುಲು ಕಿಡಿ

ದಾವಣಗೆರೆ, ಜು. 04 (DaijiworldNews/MB) : ಸಿದ್ದರಾಮಯ್ಯ ಅವರು ಕುಣಿಯೋಕೆ ಬಾರದವರು ನೆಲ ಡೊಂಕು ಅಂದರು ಎನ್ನುವಂತೆ ದೂರಿದ್ದಾರೆ. ರಾಜ್ಯ ಸರ್ಕಾರವು ಕೊರೊನಾ ನಿಯಂತ್ರಣ ಪರಿಕರಗಳ ಖರೀದಿಯಲ್ಲಿ ದೋಚಿದೆ ಎಂದು ಮಾಜಿ ಅವರು ಪ್ರಚಾರಕ್ಕಾಗಿ ಆರೋಪ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ಬಿ. ಶ್ರೀ ರಾಮುಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ಶನಿವಾರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಒಂದು ನೂರು ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಗು ಆಸ್ಪತ್ರೆಯ ಶಂಕುಸ್ಥಾಪನೆ ನೆರವೇರಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಸಿದ್ಧರಾಮಯ್ಯನವರು ಯಾವುದೇ ಆರೋಪ ಮಾಡುವ ಮುನ್ನ ಅದಕ್ಕೆ ಸಾಕ್ಷಿಗಳು ಇವೆಯೇ ಎಂದು ನೋಡಬೇಕು. ಮೊದಲು ಅವರು ರಾಜ್ಯ ಯಾವುದರಲ್ಲಿ ದೋಚಿದೆ ಎಂದು ಸಾಬೀತು ಪಡಿಸಲಿ ಎಂದು ಸವಾಲೆಸಿದಿದ್ದಾರೆ.

ಕಾಂಗ್ರೆಸ್‌ನ ಯಾರಿಗೂ ಮಾಡಲು ಯಾವುದೇ ಕೆಲಸವಿಲ್ಲ. ಪ್ರಚಾರಕ್ಕಾಗಿ ಸುಳ್ಳು ಹೇಳುತ್ತಾ ಇರುತ್ತಾರೆ ಎಂದು ಆರೋಪಿಸಿದರು.

ಕೇಂದ್ರವೇ ಮೆಚ್ಚುಗೆ ವ್ಯಕ್ತಪಡಿಸುವಂತೆ ರಾಜ್ಯ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ವಿಶ್ವದಲ್ಲಿಯೂ ರಾಜ್ಯ ಪ್ರಶಂಸೆಗೆ ಒಳಗಾಗಿದೆ. ರಾಜ್ಯ ಪ್ರತಿ ಪೈಸೆಯನ್ನು ಲೆಕ್ಕಕ್ಕೆ ಇಟ್ಟಿದೆ. ಈ ಬಗ್ಗೆ ಕಾಂಗ್ರೆಸ್‌ ಯಾವ ತನಿಖೆ ನಡೆಸಲು ಹೇಳಿದರು ನಾವು ಸಿದ್ಧ. ಹಾಗೆಯೇ ಶ್ವೇತಪತ್ರ ಹೊರಡಿಸಲೂ ಸಿದ್ದ ಎಂದು ತಿಳಿಸಿದ್ದಾರೆ.