News

ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ವಿಧಿವಶ

ಮಾ, 14: ಪ್ರಖ್ಯಾತ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ವಿಧಿವಶರಾಗಿದ್ದಾರೆ. ಅವರು ತಮ್ಮ ನಿವಾಸದಲ್ಲಿ ಬುಧವಾರ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದ ಸುದ್ದಿಯನ್ನು ಮಕ್ಕಳಾದ ಲೂಸಿ, ರಾಬರ್ಟ್‌ ಮತ್ತು ಟಿಮ್‌ ಅವರು ಮಾಧ್ಯಮಗಳಿಗೆ ತಿಳಿಸಿದ್ದು, ನಾವು ನಮ್ಮ ತಂದೆಯವರನ್ನು ಕಳೆದುಕೊಂಡು ತೀವ್ರವಾಗಿ ನೊಂದಿದ್ದೇವೆ ಎಂದಿದ್ದಾರೆ. 

ಸ್ಟೀಫನ್ ಜನವರಿ 8 ರಂದು 1942 ರಲ್ಲಿ ಜನಿಸಿದ್ದು, ಅವರಿಗೆ 76 ವರ್ಷ ವಯಸ್ಸಾಗಿತ್ತು. ಸುಮಾರು 40 ವರ್ಷಗಳ ಸುದೀರ್ಘ ಕಾಲ ವೈಜ್ಞಾನಿಕ ಕ್ಷೇತ್ರದಲ್ಲಿ ವಿಶ್ವಪ್ರಸಿದ್ಧಿ ಹೊಂದಿದ ಅವರು ಹಲವು ಪುಸ್ತಕಗಳನ್ನು ಹಾಗೂ ಅಧ್ಯಯನ ಗ್ರಂಥಗಳನ್ನು ವಿಜ್ಞಾನ ಲೋಕಕ್ಕೆ ನೀಡಿದ್ದಾರೆ.  ರಾಯಲ್ ಸೊಸೈಟಿ ಆಫ್ ಆರ್ಟ್ಸ್‌ನ ಗೌರವಾನ್ವಿತ ವ್ಯಕ್ತಿಯಾಗಿದ್ದ ಹಾಕಿಂಗ್‌ ಅವರು ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸಸ್‌ನಲ್ಲಿ ಆಜೀವ ಸದಸ್ಯತ್ವ ಹೊಂದಿದ್ದರು.