News

ರಾಹುಲ್ ಗಾಂಧಿ ಕುಟುಂಬವನ್ನು ಲೇವಡಿ ಮಾಡುವ ಕರದ್ಲಾಂಜೆ ಅವರ ಸಂಸ್ಕೃತಿ ಯಾವ ರೀತಿಯದ್ದು? - ಮದ್ವರಾಜ್ ಕಿಡಿ


ಉಡುಪಿ, ಮಾ 12 : ರಾಹುಲ್ ಗಾಂಧಿ ಪ್ರವಾಸದ ಬಗ್ಗೆ ಲೇವಡಿ ಮಾಡಿದ ಸಂಸದೆ ಶೋಬಾ ಕರದ್ಲಾಂಜೆಯ ವಿರುದ್ದ ಸಚಿವ ಪ್ರಮೋದ್ ಮದ್ವರಾಜ್ ಕಿಡಿಕಾರಿದ್ದಾರೆ. ಅವರು ಉಡುಪಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿದ್ರು, ರಾಹುಲ್ ಗಾಂಧಿ ಇಂದಿರಾ ಗಾಂಧಿಯ ಮೊಮ್ಮಗ . ನೆಹರೂ ಅವರ ಮರಿ ಮಗ . ಇದರೊಂದಿಗೆ ರಾಹುಲ್ ಗಾಂಧಿ ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಕೂಡಾ ಹೌದು. ಇಂತಹ ಗಾಂಧಿ ಕುಟುಂಬ ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಕಾಂಗ್ರೆಸ್ ಪಕ್ಷದ ಮಹಾನ್ ಯುವ ನಾಯಕನನ್ನು ಟೀಕಿಸುವ ಶೋಭಾ ಕರದ್ಲಾಂಜೆಯ ಸಂಸ್ಕೃತಿ ಎನು ಎಂಬುವುದು ಪ್ರತಿಬಿಂಬಿಸುತ್ತಿದೆ ಎಂದು ಸಂಸದೆ ಶೋಬಾ ಕರದ್ಲಾಂಜೆಯ ವಿರುದ್ದ ವಾಗ್ದಾಳಿ ನಡೆಸಿದರು.