News

ಮಂಗಳೂರು : ವಿಮಾನ ನಿಲ್ದಾಣದಲ್ಲಿ ಮಂಜು ಕವಿದ ವಾತಾವರಣ

ಮಂಗಳೂರು, ಮಾ 11 : ನಗರದಲ್ಲಿ ಭಾನುವಾರ ಮಂಜು ಕವಿದ ವಾತಾವಣವಿದ್ದ ಹಿನ್ನೆಲೆಯಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫ್ಲೈಟ್ ಲ್ಯಾಂಡಿಂಗ್ ಗೆ ಸಮಸ್ಯೆ ಉಂಟಾಗಿದ್ದು ನಾಲ್ಕು ವಿಮಾನಗಳು ಬೆಂಗಳೂರಿನತ್ತ ಡೈವರ್ಟ್ ಆಗಿದೆ.

ಸಾಂದರ್ಭಿಕ ಚಿತ್ರ

ಅಬುದಾಬಿಯಿಂದ ಹಾಗೂ ಬೆಂಗಳೂರಿನಿಂದ ಮಂಗಳೂರಿನತ್ತ ಬರುತ್ತಿದ್ದ ಜೆಟ್ ಏರ್ ವೇಸ್ ಮಂಜು ಕವಿದ ವಾತಾವರಣದಿಂದಾಗಿ ವಿಮಾನ ಇಳಿಯಲು ಸಾಧ್ಯವಾಗದೆ ಬೆಂಗಳೂರಿನತ್ತ ಮುಖ ಮಾಡಿದೆ. ಈ ಸಮಸ್ಯೆ ಸಚಿವ ಖಾದರ್ ಅವರಿಗೂ ತಟ್ಟಿದ್ದು ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಸಚಿವರಿದ್ದ ಜೆಟ್ ಏರ್ ವೇಸ್ 8.10ಕ್ಕೆ ತಲುಪಬೇಕಿತ್ತು ಆದರೆ ಮೋಡದ ಸಮಸ್ಯೆಯಿಂದ ವಿಮಾನ ಬೆಂಗಳೂರಿಗೆ ವಾಪಾಸ್ಸಾಗಿ ಮತ್ತೆ ಸಚಿವ ಖಾದರ್ ಮಂಗಳೂರಿನತ್ತ ಪ್ರಯಾಣ ಬೆಳೆಸಿದರು.