News

ಉಡುಪಿ ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ವಿರುದ್ಧ ಅರೆಸ್ಟ್ ವಾರೆಂಟ್ !

ಉಡುಪಿ, ಮಾ 10:  ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ವಿರುದ್ಧ ವಿಶೇಷ ನ್ಯಾಯಾಲಯದಿಂದ ಅರೆಸ್ಟ್ ವಾರೆಂಟ್ ಜಾರಿಯಾಗಿದೆ.

ಸರ್ಕಾರಿ ಭೂಮಿ ಒತ್ತುವರಿ ಬಗ್ಗೆ ಮಾಹಿತಿ ನೀಡಲು ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ವಿಫಲರಾಗಿದ್ದರು. ಈ ಹಿನ್ನೆಲೆ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಭೂ ಒತ್ತುವರಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ನಡೆದ ಸರ್ಕಾರಿ ಭೂಮಿಗಳ ಒತ್ತುವರಿ ಮತ್ತು ಅದರ ತೆರವಿಗೆ ಕೈಗೊಂಡಿರುವ ಕ್ರಮಗಳ ಕೋರ್ಟ್ ವರದಿ ನೀಡುವಂತೆ ಸೂಚಿಸಿತ್ತು. ಕೆರೆ, ಸರಕಾರಿ ಭೂಮಿ, ರಸ್ತೆಯ ಇಕ್ಕೆಲ ಒತ್ತುವರಿ ಕುರಿತು ವಿಶೇಷ ಭೂ ನ್ಯಾಯಾಲಯದಲ್ಲಿ ಪ್ರಕರಗಳು ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ಕೇಳಿತ್ತು. ಆದರೆ ಡಿಸಿ ಯಾವುದೇ ಮಾಹಿತಿ ನೀಡಿರಲಿಲ್ಲ. ಬೆಂಗಳೂರಲ್ಲಿರುವ ಭೂ ಒತ್ತುವರಿ ಕುರಿತ ವಿಶೇಷ ನ್ಯಾಯಾಲಯ ಬಂಧನದ ಆದೇಶ ನೀಡಿದೆ.