News

ಮೈಸೂರಿನಲ್ಲಿ ರಸ್ತೆ ಅಪಘಾತ- ಕಾಸರಗೋಡಿನ ಇಬ್ಬರ ದುರ್ಮರಣ

ಕಾಸರಗೋಡು, ಮಾ 07 : ಮೈಸೂರಿನಲ್ಲಿ ನಡೆದ ಪಿಕಪ್ ವ್ಯಾನ್ ಮತ್ತು ಕೆ ಎಸ್ ಆರ್ ಟಿ ಸಿ ಬಸ್ಸು ನಡುವೆ ಉಂಟಾದ ಅಪಘಾತದಲ್ಲಿ ಕಾಸರಗೋಡಿನ ಇಬ್ಬರು ಯುವಕರು ಮೃತಪಟ್ಟ ಘಟನೆ ಮಾ 07 ರ ಮಂಗಳವಾರ ಬೆಳಿಗ್ಗೆ ನಡೆದಿದೆ. ಮೃತಪಟ್ಟವರನ್ನು ಉಳಿಯತ್ತಡ್ಕದ ಜುನೈದ್ ( 26) ಮತ್ತು ಅಝರುದ್ದೀನ್ (26) ಎಂದು ಗುರುತಿಸಲಾಗಿದೆ. ಮೈಸೂರು - ಬೆಂಗಳೂರು ರಸ್ತೆಯ ಹುಣಸೂರು ಎಂಬಲ್ಲಿ ಈ ಅಪಘಾತ ನಡೆದಿದೆ.


ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಅಪಘಾತದ ರಭಸಕ್ಕೆ ಪಿಕಪ್ ವ್ಯಾನ್ ನಜ್ಜುಗುಜ್ಜಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಹರಸಾಹಸಪಟ್ಟು ಮೃತದೇಹಗಳನ್ನು ಹೊರತೆಗೆದ್ದಾರೆ. ಇಬ್ಬರು ಸಾಮಾಗ್ರಿ ಖರೀದಿಗೆಂದು ಬೆಂಗಳೂರಿಗೆ ತೆರಳಿದ್ದರು. ಮಂಗಳವಾರ ಬೆಳಿಗ್ಗೆ ಇಬ್ಬರೂ ಕಾಸರಗೋಡಿನಿಂದ ಪ್ರಯಾಣ ಬೆಳೆಸಿದ್ದರು. ಮಾಹಿತಿ ತಿಳಿದು ಸಂಬಂಧಿಕರು ಮೈಸೂರಿಗೆ ತೆರಳಿದ್ದು ರಾತ್ರಿ ಮೃತದೇಹಗಳನ್ನು ಉಳಿಯತ್ತಡ್ಕಕ್ಕೆ ತರುವ ಸಾಧ್ಯತೆ ಇದೆ.