News

ಕದ್ರಿ ಶ್ರೀ ಮಂಜುನಾಥ ದೇವಾಲಯದಲ್ಲಿ ಮಹಾ ಶಿವರಾತ್ರಿಯ ಸಂಭ್ರಮ – ಕ್ಷೇತ್ರಕ್ಕೆ ಹರಿದು ಬಂದ ಭಕ್ತ ಸಾಗರ

ಮಂಗಳೂರು, ಫೆ 13: ಶಿವರಾತ್ರಿ ಪ್ರಯುಕ್ತ ಕದ್ರಿ ಶ್ರೀ ಮಂಜುನಾಥ ದೇಗುಲಗದಲ್ಲಿ ಇಂದು ಮುಂಜಾನೆಯಿಂದಲೇ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಿವನ ಅರಾಧನೆಯಲ್ಲಿ ತೊಡಗಿದ್ದರು.

ಕರಾವಳಿಯಲ್ಲಿ ಮಹಾ ಶಿವರಾತ್ರಿಯ ಸಂಭ್ರಮ ಮನೆಮಾಡಿದ್ದು, ಶಿವ ಪೂಜೆಯನ್ನು ಮಾಡುವ ಮೂಲಕ ವಿಶೇಷವಾಗಿ ಶಿವರಾತ್ರಿಯನ್ನು ಆಚರಿಸಲಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಿವರಾತ್ರಿಯನ್ನು ಜನ ಶ್ರದ್ಧೆ, ಭಕ್ತಿಯಿಂದ ಆಚರಿಸುತ್ತಿದ್ದಾರೆ. ಭಕ್ತರು ಬೆಳಗ್ಗೆಯಿಂದಲೇ ಶಿವ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ  ಪೂಜೆ ಸಲ್ಲಿಸುವ ಮೂಲಕ ಕೃತಾರ್ಥರಾಗುತ್ತಿದ್ದಾರೆ. ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಕದ್ರಿ ಜೋಗಿ ಮಠ ಸೇರಿದಂತೆ ಜಿಲ್ಲೆಯ ಶಿವ ದೇವಸ್ಥಾನಗಳಲ್ಲಿ ಶಿವನ ಆರಾಧನೆ ವೈಭವದಿಂದ ನಡೆಯುತ್ತಿದೆ. ಕದ್ರಿ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ ಕಳೆಗಟ್ಟಿದೆ. ಭಕ್ತಾಧಿಗಳು ಉಪವಾಸ ವೃತ ಮಾಡುವ ಮುಖಾಂತರ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ.