News

ಮೀನಾಡಿ ದೇಂತಾರ್ ನಲ್ಲಿ ಕಾರು ಚರಂಡಿಗೆ- ಪ್ರಯಾಣಿಕರು ಅಪಾಯದಿಂದ ಪಾರು

ಕಡಬ,ಫೆ 11: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಂದು ಅಲ್ಲಿಂದ ಪೆರಿಯಶಾಂತಿ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ಹೋಗುವ ಯಾತ್ರಾರ್ಥಿಗಳ ಕಾರೊಂದು ಪೆರಿಯಶಾಂತಿ ಮರ್ಧಾಳ ರಾಜ್ಯ ಹೆದ್ದಾರಿಯ ರೆಂಜಿಲಾಡಿ ಗ್ರಾಮದ ಮೀನಾಡಿಯ ದೇಂತಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದು ಕಾರು ಸಂಪೂರ್ಣ ಜಖಂಗೊಂಡಿದ್ದರೂ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಬೆಳ್ಳಂಬೆಳಿಗ್ಗೆ ಸುಮಾರು 4 ಗಂಟೆ ಹೊತ್ತಿಗೆ ಏಕಾಏಕಿ ಶಬ್ದವೊಂದು ಕೇಳಿದಂತೆ ಸ್ಥಳೀಯ ನಿವಾಸಿ ಲಕ್ಷ್ಮಣ ಗೌಡ ರಸ್ತೆಗೆ ಬಂದು ನೋಡಿದಂತೆ ಕಾರೊಂದು ರಸ್ತೆ ಬದಿಯ ಚರಂಡಿಗೆ ಬಿದ್ದಿರುವುದು ಗಮನಿಸಿದ್ದು ಕೂಡಲೇ 108 ಆಂಬುಲೆನ್ಸ್‌ಗೆ ನೀಡಿದ ಮಾಹಿತಿಯಂತೆ ಗಾಯಾಳುಗಳನ್ನು 108  ಅಂಬುಲೆನ್ಸ್ ತರಿಸಿ ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಇಬ್ಬರು ಹೆಂಗಸರು, ಒಂದು ಮಗು, ಒಬ್ಬ ಗಂಡಸು ಹಾಗೂ ಕಾರು ಚಾಲಕ ಸೇರಿದಂತೆ ಐದು ಜನ ಇದ್ದು ಕೂಡಲೇ ಆಸ್ಪತ್ರೆಗೆ ದಾಖಲಿಸುವಲ್ಲಿ ಸ್ಥಳಿಯರಾದ ಲಕ್ಷ್ಮಣ ಗೌಡ ಧಾವಿಸಿ ಮಾನವೀಯತೆ ಮೆರೆದಿದ್ದಾರೆ.