News

ವಿಟ್ಲ : ಚಿನ್ನಾಭರಣ ಸಾಗಾಟ ಮಾಡುವ ವ್ಯಕ್ತಿಗೆ ಹಲ್ಲೆ ನಡೆಸಿ ಚಿನ್ನ ಹಾಗೂ ನಗದು ದರೋಡೆ ಪ್ರಕರಣ-ಮತ್ತೊಬ್ಬನ ಬಂಧನ

ಕಾಸರಗೋಡು, ಫೆ 10: ಚಿನ್ನಾಭರಣ ಸಾಗಾಟ ಮಾಡುತ್ತಿದ್ದ ವ್ಯಕಿಯೋರ್ವನ ಮೇಲೆ ಹಲ್ಲೆ ನಡೆಸಿ ಒಂದೂವರೆ ಕಿಲೋ ಚಿನ್ನಾಭರಣ ಮತ್ತು ನಾಲ್ಕು ಲಕ್ಷ ರೂ . ನಗದು ದರೋಡೆ ಗೈದ ಘಟನೆಗೆ ಸಂಬಂಧಪಟ್ಟಂತೆ ವಿಟ್ಲ ನಿವಾಸಿಯೋರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಿಟ್ಲ ಒಕ್ಕೆತ್ತೂರಿನ ಅಬ್ದುಲ್ ನವೀದ್ ( 21) ಎಂದು ಗುರುತಿಸಲಾಗಿದೆ. ಇದರಿಂದ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಎಂಟಕ್ಕೇರಿದೆ. ಪ್ರಕರಣದಲ್ಲಿ ಇನ್ನು ಮೂವರು ತಲೆಮರೆಸಿಕೊಂಡಿದ್ದಾರೆ.

2016ರ ಜನವರೀ 12 ರಂದು ರಾತ್ರಿ ಎಂಟು ಗಂಟೆ ಸುಮಾರಿಗೆ ನಗರದ ಕೆ ಎಸ್ ಆರ್ ಟಿ ಸಿ ರಸ್ತೆಯಲ್ಲಿ ತ್ರಿಶೂರಿನ ಟೋನಿ ಎಂಬವರ ಬಳಿಯಿದ್ದ 1. 378 ಗ್ರಾಂ ಚಿನ್ನಾಭರಣ , 4, 36, 350 ರೂ . ನಗದನ್ನು ದರೋಡೆ ಮಾಡಿದ್ದರು. ಪುತ್ತೂರಿನ ಜ್ಯುವೆಲ್ಲರಿ ವೊಂದಕ್ಕೆ ಚಿನ್ನಾಭರಣ ನೀಡಿದ ಬಳಿಕ ಕಾಸರ ಗೋಡಿಗೆ ತಲಪಿದ್ದು , ಬಸ್ಸಿನಿಂದ ಇಳಿದು ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ತಂಡವು ಹಲ್ಲೆ ನಡೆಸಿ ದರೋಡೆ ನಡೆಸಿತ್ತು.