News

ಕಾಸರಗೋಡು: ರಸ್ತೆ ಅಪಘಾತದಲ್ಲಿ ಮುಸ್ಲಿಂ ಲೀಗ್ ಮುಖಂಡ ಸಾವು

ಕಾಸರಗೋಡು, ಫೆ 10: ಕೆ ಎಸ್ ಆರ್ ಟಿ ಸಿ ಬಸ್ಸು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಸವಾರ ಮೃತಪಟ್ಟು ಸಹ ಸವಾರ ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ಮೇಲ್ಪರಂಬದಲ್ಲಿ ನಡೆದಿದೆ. ಮೃತಪಟ್ಟವರನ್ನು ಕೀಯೂರಿನ ಪಿ .ಬಿ ಅಶ್ರಫ್ ( 45) ಎಂದು ಗುರುತಿಸಲಾಗಿದೆ. ಅಶ್ರಫ್ ಬ್ಲಾಕ್ ಪಂಚಾಯತ್ ಮಾಜಿ ಸದಸ್ಯ ಹಾಗೂ ಮುಸ್ಲಿಂ ಲೀಗ್ ಮುಖಂಡರಾಗಿದ್ದರು. ಗಾಯಗೊಂಡ ಅನ್ವರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೇಲ್ಪರಂಬ ಕಡೆಯಿಂದ ಬರುತ್ತಿದ್ದ ಬೈಕ್ ಮತ್ತು ಎದುರಿನಿಂದ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸು ನಡುವೆ ಚಲಿಯಾಂಗೋಡು ಎಂಬಲ್ಲಿ ಅಪಘಾತ ನಡೆದಿದ್ದು , ಗಂಭೀರ ಗಾಯಗೊಂಡ ಅಶ್ರಫ್ ಹಾಗೂ ಅನ್ವರ್ ನನ್ನು ಕಾಸರಗೋಡು ಆಸ್ಪತ್ರೆಗೆ ತಲಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಅಶ್ರಫ್ ಮೃತಪಟ್ಟರು. ಕಾಸರಗೋಡು ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.