News

ಬಿಲ್ಲವ ಯುವಕರು ದಾರಿ ತಪ್ಪಲು ಜನಾರ್ದನ ಪೂಜಾರಿಯೇ ಕಾರಣ - ಮಧು ಬಂಗಾರಪ್ಪ ಆರೋಪ

ಮಂಗಳೂರು, ಫೆ 9: ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಒಬ್ಬ ನೈಜ ಆರ್‌ಎಸ್‌ಎಸ್‌ಸಿಗ ಎಂದು ರಾಜ್ಯ ಯುವ ಜೆಡಿ‌ಎಸ್ ಅಧ್ಯಕ್ಷ ಮಧು ಬಂಗಾರಪ್ಪ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಕರಾವಳಿಯಲ್ಲಿ ಬಿಲ್ಲವ ಯುವಕರು ದಾರಿ ತಪ್ಪಲು ಜನಾರ್ದನ ಪೂಜಾರಿ ಕಾರಣ. ಇವರು ಒಬ್ಬ ನೈಜ ಆರ್‌ಎಸ್‌ಎಸ್‌ಸಿಗ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇತ್ತೀಚೆಗೆ ಪೂಜಾರಿ ತಮ್ಮ ಆತ್ಮಕಥನ ಸಾಲಮೇಳದ ಸಂಗ್ರಾಮವನ್ನು ಬಿಡುಗಡೆಗೊಳಿಸಿದ್ದಾರೆ. ಆ ಪುಸ್ತಕದಲ್ಲಿ ಬಂಗಾರಪ್ಪ ಒಬ್ಬ ಭ್ರಷ್ಟಾಚಾರಿ, ಇಂದಿರಾ ಗಾಂಧಿ ಬಂಗಾರಪ್ಪನವರಿಗೆ ಹೊಡೆಯಲು ಮುಂದಾಗಿದ್ರು ಎಂದು ಜನಾರ್ದನ ಪೂಜಾರಿ ಉಲ್ಲೇಖ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಮಧು ಬಂಗಾರಪ್ಪ, ಪೂಜಾರಿಯವರದ್ದು ಆತ್ಮಚರಿತ್ರೆಯಲ್ಲ, ಅದೊಂದು ಪಾಪದ ಚರಿತ್ರೆ. ಬಂಗಾರಪ್ಪನವರಿಗೆ ಇಂದಿರಾ ಹೊಡೆಯಲು ಮುಂದಾಗಿದ್ರು ಎನ್ನುವ ವಿಚಾರ ಶುದ್ದ ಸುಳ್ಳು. ಅವರು ಎಲ್ಲಾ ಆರೋಪಗಳಿಂದ ಖುಲಾಸೆಗೊಂಡಿದ್ದಾರೆ. ಪೂಜಾರಿ ಆತ್ಮಚರಿತ್ರೆಯಲ್ಲಿ ಸುಮ್ಮನೆ ಬಂಗಾರಪ್ಪನವರ ಬಗ್ಗೆ ಬರೆಯುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಮಧು ಬಂಗಾರಪ್ಪ ಪೂಜಾರಿಗೆ ತಿರುಗೇಟು ನೀಡಿದ್ಧಾರೆ.