News

ಉಡುಪಿ: ಕಿಡಿಗೇಡಿಗಳಿಂದ ಶಿರೂರು ಮಠದ ಸ್ವಾಮೀಜಿಗಳ ಕಾರು ಜಖಂ- ದೂರು ದಾಖಲು

ಉಡುಪಿ, ಫೆ:  ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಕಾರನ್ನು ಯಾರೋ ಕಿಡಿಗೇಡಿಗಳು ಜಖಂಗೊಳಿಸಿದ ಘಟನೆ ಫೆ.07ರ ಬುಧವಾರ ತಡ ರಾತ್ರಿ ನಡೆದಿದೆ. ಶಿರೂರು ಮಠದ ಮೂಲ ಮಠದ ಹೊರಾಂಗಣದಲ್ಲಿ ನಿನ್ನೆ ಸ್ವಾಮೀಜಿ ಕಾರನ್ನು ನಿಲ್ಲಿಸಿದ್ದರು. ಇಂದು ಬೆಳಿಗ್ಗೆ ಸ್ವಾಮೀಜಿಗಳು ಕಾರನ್ನು ಪರಿಶೀಲಿಸಿದಾಗ ಕಾರಿನ ಮುಂಬಾಗ ಜಖಂ ಆಗಿರುವುದು ಕಂಡು ಬಂದಿದೆ. ನಿನ್ನೆ ರಾತ್ರಿ ದನ ಕಳ್ಳತನ ನಡೆಸುವ ಗುಂಪುಗಳಿಂದ ಈ ಕೃತ್ಯ ನಡೆದಿದೆ ಎಂದು ಅನುಮಾನಿಸಲಾಗಿದೆ. ಈ ಬಗ್ಗೆ ಉಡುಪಿಯ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.