News

ಬಂಟ್ವಾಳ : ಒಣಹುಲ್ಲಿಗೆ ತಗುಲಿದ ಬೆಂಕಿ - ಭಯಭೀತರಾದ ಸ್ಥಳೀಯರು

ಬಂಟ್ವಾಳ ಜ 14 : ಬಿ.ಸಿ ರೋಡಿನ ಕೈಕಂಬ ಪೂಂಜಾ ಸ್ಟೇಡಿಯಂನಲ್ಲಿ ಜ 14 ರ ಮಧ್ಯಾಹ್ನ ಹಠಾತ್ತನೆ ಕಾಣಿಸಿಕೊಂಡ ಬೆಂಕಿಯಿಂದ ಸ್ಥಳೀಯ ಜನರು ಭಯಭೀತರಾದರು. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಕೈಕಂಬದ ಪೂಂಜಾ ಸ್ಟೇಡಿಯಂನಲ್ಲಿ ಯಾರೋ ಸ್ಥಳೀಯರು ಹುಲ್ಲು ಗಳನ್ನು ನಾಶ ಮಾಡಲು ಬೆಂಕಿಯನ್ನು ಕೊಟ್ಟ ಪರಿಣಾಮ ಬೆಂಕಿ ಸಂಪೂರ್ಣ ಗುಡ್ಡೆಯನ್ನು ಆವರಿಸಿಕೊಂಡಿದೆ. ಇದರಿಂದ ಪೇಟೆಯ ಜನರು ಅತಂಕಕ್ಕೆ ಒಳಗಾಗಿದ್ದರು. ಕೂಡಲೇ ಬಂಟ್ವಾಳ ಅಗ್ನಿಶಾಮಕ ದಳದ ವರು ಸ್ಥಳಕ್ಕೆ ಬೇಟಿ ನೀಡಿ ಬೆಂಕಿಯನ್ನು ಆರಿಸಲು ಯಶಸ್ವಿಯಾದರು. ಬಂಟ್ವಾಳ ನಗರ ಠಾಣಾ ಉಪನಿರೀಕ್ಷಕ ಚಂದ್ರಶೇಖರ ಸ್ಥಳದಲ್ಲಿದ್ಧರು.