News

ಮಂಗಳೂರು: ಪ್ರೇಕ್ಷಕರನ್ನು ರಂಜಿಸಿದ ಫರ್ಹಾನ್ ಅಖ್ತರ್ ಲೈವ್ ಶೋ

 

ಮಂಗಳೂರು ಜ 14: ಇಲ್ಲಿನ ಅಡ್ಯಾರ್ ಗಾರ್ಡನ್‌ನಲ್ಲಿ ಜ 13 ರ ಶನಿವಾರ ಸಂಜೆ ನಡೆದ ಇಂಪೀರಿಯಲ್ ಬ್ಲೂ ಸೂಪರ್ ಹಿಟ್ಸ್ ನೈಟ್ 4 ನೇ ಅವೃತ್ತಿಯಲ್ಲಿ ಬಾಲಿವುಡ್ ನ ರಾಕ್‌ಸ್ಟಾರ್ ಫರ್ಹನ್ ಅಖ್ತರ್ ಭಾಗವಹಿಸಿ ಸಂಗೀತಮಯ ಸಂಜೆಯನ್ನು ಪ್ರೇಕ್ಷಕರಿಗೆ ನೀಡಿದರು. ತನ್ನ ಆಕರ್ಷಕ ಹಾಡುಗಾರಿಗೆಯಿಂದ ಫರ್ಹಾನ್ ಅಖ್ತರ್ ತನ್ನದೆ ಸೂಪರ್ ಹಿಟ್ ಚಿತ್ರಗಳ ಹಾಡು ಹಾಗೂ ಇತರ ಹಾಡುಗಳ ಮೂಲಕ ಸೇರಿದ ಪ್ರೇಕ್ಷಕರನ್ನ ಮನ ಸೆಳೆದರು. ಫರ್ಹನ್ ಅಖ್ತರ್ ಮತ್ತು ಅವರ ತಂಡ ಸೇರಿ ರಾಕ್ ಆನ್, ಸೇನೋರಿಟ, ದಿಲ್ ಚಾಹ್ತಾ ಹೈ, ಅತರಂಗಿ ಯಾರಿ, ಜಿಂದಾ ಹಾಡುಗಳಿಂದ ಪ್ರೇಕ್ಷಕರನ್ನ ಕುಣಿದು ಕುಪ್ಪಳಿಸುವಂತೆ ಮಾಡಿದರು. ಕಾರ್ಯಕ್ರಮದ ಮುಂಚಿತವಾಗಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಒಬ್ಬ ಕಲಾವಿದನಿಗೆ ಹಾಡುಗಾರನಿಗೆ ಉತ್ತಮ ವೇದಿಕೆ ದೊರೆಯುವುದು ಬಹಳ ಮುಖ್ಯ . ಹಾಗೂ ಅದನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಒಬ್ಬ ಉದಯೋನ್ಮಖ ನಟ, ಹಾಡುಗಾರನ ಹೊಣೆ ಎಂದರು.