News

ಕಾಸರಗೋಡು: ವಾಹನಗಳನ್ನು ತಡೆದು ದರೋಡೆ ಮಾಡುತ್ತಿದ್ದ ಬಾಲಕನ ಬಂಧನ

ಕಾಸರಗೋಡು, ಜ 12: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ತಡೆದು ದರೋಡೆ ನಡೆಸುತ್ತಿದ್ದ 17 ವರ್ಷದ ಬಾಲಕ ಸೇರಿದಂತೆ ಇಬ್ಬರನ್ನು ಮಂಜೇಶ್ವರ  ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬೆಜ್ಜಂಗಳದ  ಮೊಯ್ದಿನ್ (21) ಮತ್ತು 17 ವರ್ಷದ ಬಾಲಕ ಈ ಕೃತ್ಯದಲ್ಲಿ ತೊಡಗಿದ್ದರು ಎಂದು ತಿಳಿದುಬಂದಿದೆ. ಹೊಸಂಗಡಿಯ ರಸ್ತೆ ಬದಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ಪಾಲಕ್ಕಾಡ್ ನಿವಾಸಿಯನ್ನು ಬೆದರಿಸಿ ನಗದನ್ನು ದರೋಡೆ ಮಾಡಿದ್ದರು.

ಹಕೀಮ್ ಎಂಬುವವರು ಉಳ್ಳಾಲದ ಮಸೀದಿಗೆ ತೆರಳಿ ಮರಳುತ್ತಿದ್ದಾಗ ಹೊಸಂಗಡಿ ರಸ್ತೆ ಬದಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಈ ನಡುವೆ ಸ್ಕೂಟರ್ ನಲ್ಲಿ ಬಂದ ಇಬ್ಬರು ಬೆದರಿಸಿ ಹಣ ದೋಚಿ ಪರಾರಿಯಾಗಿದ್ದರು. ಈ ಬಗ್ಗೆ  ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿತ್ತು.

ಇದೀಗ ಪೊಲೀಸರು ಇವರನ್ನು ಬಂಧಿಸಿದ್ದು, ಮಂಜೇಶ್ವರ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.