News

ಬಂಟ್ವಾಳ: ವಾಟ್ಸಪ್ ಗುಂಪಿನಲ್ಲಿ ಧರ್ಮದ ನಡುವೆ ದ್ವೇಷ ಬಿತ್ತುವ ಸಂದೇಶ ರವಾನೆ – ಇಬ್ಬರ ಬಂಧನ

ಮಂಗಳೂರು, ಜ 12: ಕೋಮು ದ್ವೇಷ ಬಿತ್ತುವ ಸಂದೇಶಗಳನ್ನು ವಾಟ್ಸಪ್ ಗುಂಪಿನಲ್ಲಿ ರವಾನೆ ಮಾಡಿದ ಆರೋಪದ ಮೇಲೆ ಇಬ್ಬರನ್ನು ಬಂಟ್ವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್ ಚಾಲಕ ಬಾಲಕೃಷ್ಣ ಪೂಜಾರಿ ಮತ್ತು ಸತೀಶ್ ಬಂಧಿತ ಆರೋಪಿಗಳು. ಇವರಿಬ್ಬರೂ ಬಂಟ್ವಾಳ ನಿವಾಸಿಗಳಾಗಿದ್ದು ವಾಟ್ಸಪ್ ನಲ್ಲಿ ಮತೀಯ ದ್ವೇಷ ಬಿತ್ತುವ ಮತ್ತು ಮಹಿಳೆಗೆ ನಿಂದನೆ ಮಾಡುವ ಸಂದೇಶಗಳನ್ನು ರವಾನಿಸಿದ್ದರು.  

ಆರೋಪಿಗಳ ವಿರುದ್ಧ ಮತೀಯ ದ್ವೇಷ ಸೃಷ್ಟಿಸಲು ಯತ್ನ, ಸಮಾಜದಲ್ಲಿ ಶಾಂತಿ ಕದಡಲು ಯತ್ನ ಮತ್ತು ಮಹಿಳೆಯ ಘನತೆಗೆ ಧಕ್ಕೆ ತರಲು ಯತ್ನಿಸಿದ ಆರೋಪದ ಮೇಲೆ‌ ಪ್ರಕರಣ ದಾಖಲಿಸಲಾಗಿದೆ ಎಂದು ದಕ್ಷಿಣ ಕನ್ನಡ ಎಸ್ ಪಿ ಸಿ.ಎಚ್.ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.