News

ಪಕ್ಷ ನೋಡಿ ಮತ ಹಾಕಬೇಡಿ, ವ್ಯಕ್ತಿ ನೋಡಿ ಮತ ಹಾಕಿ - ಹುಚ್ಚ ವೆಂಕಟ್

ಮಂಗಳೂರು, ಜ 12: ರಾಜಕೀಯ ವ್ಯಕ್ತಿಗಳನ್ನು ನಂಬಿ  ಮೋಸ ಹೋಗಬೇಡಿ. ಪಕ್ಷವನ್ನು ನೋಡಿ ಮತ ಹಾಕಬೇಡಿ. ಬದಲಾಗಿ ಉತ್ತಮ ವ್ಯಕ್ತಿಗಳನ್ನು ಗುರುತಿಸಿ ಮತ ಹಾಕಿ ಎಂದು ನಟ-ನಿರ್ದೇಶಕ ಹುಚ್ಚ ವೆಂಕಟ್ ತಿಳಿಸಿದ್ದಾರೆ.  

ಮಂಗಳೂರಿಗೆ ತನ್ನ ನೂತನ ಚಿತ್ರ ಡಿಕ್ಟೇಟರ್ ಪ್ರಚಾರಕ್ಕೆಂದು ಆಗಮಿಸಿದ ವೇಳೆ ಮಾತನಾಡಿದ ವೆಂಕಟ್, ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿದೆ. ಅದನ್ನು ತಡೆ ಹಿಡಿಯುವಂತ ಕಾರ್ಯ ರಾಜ್ಯ ಸರ್ಕಾರ ಮಾಡಬೇಕು. ರೈತರಿಗೆ ಉಚಿತ ವಿದ್ಯುತ್ ಕೊಡುವಂತಹ ವ್ಯವಸ್ಥೆ ಇಲ್ಲಿ ಆಗಬೇಕು. ತೆಲಂಗಾಣದ ಮಾದರಿಯಂತೆ ಕರ್ನಾಟಕದಲ್ಲಿಯೂ  24*7 ವಿದ್ಯುತ್ ಸಿಗುವಂತಹ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಹೇಳಿದ್ದಾರೆ.