News

ಚಪ್ಪಲಿಯಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿ ಮಹಿಳೆಯರ ಪೋಟೋ ತೆಗೆಯುತ್ತಿದ್ದ ಕಾಮುಕನ ಬಂಧನ

ತಿರುವನಂತಪುರ ಜ 11: ತನ್ನ ಪಾದರಕ್ಷೆಯಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟುಕೊಂಡು ಮಹಿಳೆಯರ ಫೋಟೋ ತೆಗೆಯುತ್ತಾ ಖತರ್ನಾಕ್ ಕೆಲಸ ಮಾಡುತ್ತಿದ್ದ ಕಾಮುಕನೊಬ್ಬ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಂಧಿತ ಆರೋಪಿಯನ್ನು ಕೇರಳದ ಬಿಜು ಎಂದು ಗುರುತಿಸಲಾಗಿದೆ. ಈತ ತ್ರಿಶೂರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಕಲೋಲ್‍ಸವಂ ಎನ್ನುವ ಕಾರ್ಯಕ್ರಮದಲ್ಲಿ ಮಹಿಳೆಯರ ಫೋಟೋ ತೆಗೆಯಲು ಯತ್ನಿಸುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದಾನೆ.ತನ್ನ ಚಪ್ಪಲಿಯಲ್ಲಿ ಸಣ್ಣ ರಂದ್ರ ಮಾಡಿ ಆ ರಂದ್ರಕ್ಕೆ ಕ್ಯಾಮೆರಾ ಬರೋತರ ಜೋಡಿಸಿದ್ದ, ಇನ್ನು ಬೇರೆಯವರು ತನ್ನ ಪಾದರಕ್ಷೆ ಮೇಲೆ ಕಾಲಿಟ್ಟರೆ ಹಾನಿಯಾಗಬಾರದು ಎಂದು ವಿಶೇಷ ಸ್ಟೀಲ್ ಕವರ್ ಕೂಡಾ ಅಳವಡಿಸಿಕೊಂಡಿದ್ದ. ಕಾಮುಕ ಬಿಜು ಜನಸಂದಣಿ ಇರುವಲ್ಲಿ ಹೋಗಿ ತನ್ನ ಚಪ್ಪಲಿಯನ್ನು ಬಿಟ್ಟು ವಿಡಿಯೋ ಪೋಟೋ ತೆಗೆಯುತ್ತಿದ್ದ , ತನ್ನ ಈ ಕೆಲಸಕ್ಕೆಂದು ಎರಡೆರಡು ಪೋನ್ ಕೂಡಾ ಇರಿಸಿಕೊಂಡಿದ್ದ. ಈತ ಕಾಲುಗಳನ್ನು ನೋಡುತ್ತಾ ನಿಧಾನವಾಗಿ ಚಲಿಸುತ್ತಿರುವಾಗ ಯಾಕೋ ಪೊಲೀಸರಿಗೆ ಅನುಮಾನ ಬಂದು ಹಿಡಿದು ವಿಚಾರಿಸಿದ್ದಾರೆ.  ಆಗ ಇವನ ಖತರ್ನಾಕ್ ಕೆಲಸ ಬಯಲಾಗಿದೆ.