News

ಬಂಟ್ವಾಳ: ಬಸ್ ಹಾಗೂ ಲಾರಿ ಡಿಕ್ಕಿ-ಅಪಘಾತದ ಬಳಿಕ ತಾಂತ್ರಿಕ ದೋಷದಿಂದ  ಬಸ್ ಬಿತ್ತು ಹಳ್ಳಕ್ಕೆ

 
ಬಂಟ್ವಾಳ ಜ 10 : ಟಿಪ್ಪರ್ ಲಾರಿ ಮತ್ತು ಬಸ್  ಮುಖಾಮುಖಿ ಡಿಕ್ಕಿಯಾದ  ಘಟನೆ ಬಂಟ್ವಾಳ ಸಮೀಪದ ಅಂಚಿಕಟ್ಟೆ ಎಂಬಲ್ಲಿ ನಡೆದಿದೆ. ಬಂಟ್ವಾಳ ಕಡೆಯಿಂದ ವಗ್ಗ ಕಡೆಗೆ ಸಂಚರಿಸುವ ಲಾರಿ ಮತ್ತು ಧರ್ಮಸ್ಥಳದಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಬಸ್  ಡಿಕ್ಕಿಯಾಗಿದೆ.  ಪರಿಣಾಮ ಅದೃಷ್ಟವಶಾತ್  ಯಾವುದೇ ಗಾಯಗಳಾಗದೆ ಬಸ್ ಪ್ರಯಾಣಿಕರು ಪಾರಾಗಿದ್ದರೆ. ಘಟನೆಯ ಬಳಿಕ ಬಸ್ ಚಾಲಕ ಅಪಘಾತಕ್ಕೊಳಗಾದ ಬಸ್ ನ್ನು  ಚಲಾಯಿಸಲು ಪ್ರಯತ್ನಿಸಿದಾಗ ತಾಂತ್ರಿಕ ದೋಷ ದಿಂದ ಬಸ್ ಹಿಂದೆ ಸರಿದು ರಸ್ತೆ ಬದಿಯ ಹಳ್ಳಕ್ಕೆ ಬಿದ್ದಿದೆ.