News

ಕಾಸರಗೋಡು : ಮದ್ರಸ ಅಧ್ಯಾಪಕ ಕೊಲೆ ಪ್ರಕರಣ- ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್

ಕಾಸರಗೋಡು ಜ 09 : ಹಳೆ ಸೂರ್ಲುವಿನ ಮದ್ರಸ ಅಧ್ಯಾಪಕ ರಾಗಿದ್ದ ಮುಹಮ್ಮದ್ ರಿಯಾಜ್ ಮೌಲವಿ ಕೊಲೆ ಪ್ರಕರಣದ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಕೇಳುಗುಡ್ಡೆ ಅಯ್ಯಪ್ಪ ಭಜನಾ ಮಂದಿರ ಸಮೀಪದ ಅಜೇಶ್ ( 20) ನಿತಿನ್ ( 19) ಮತ್ತು ಅಖಿಲೇಶ್ ( 25) ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಮಾರ್ಚ್ 20 ರಂದು ಕೊಲೆ ನಡೆದಿತ್ತು. ಆರೋಪಿಗಳು ಕಣ್ಣೂರು ಸೆಂಟ್ರಲ್ ಜೈಲ್ ನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.