News

ಕಾಸರಗೋಡು:ನಿರ್ಜನ ಪ್ರದೇಶದಲ್ಲಿ ಕಾರು ಪತ್ತೆ, ಚಿಮೇನಿ ಕೊಲೆ ಪ್ರಕರಣಕ್ಕೆ ಬಳಸಿರುವ ಸಾಧ್ಯತೆ ಕುರಿತು ತನಿಖೆ


ಕಾಸರಗೋಡು ಜ 09 : ಇಲ್ಲಿನ ನೀಲೇಶ್ವರ ಸಮೀಪದ ಮಡಿಕೈ ಉಳಿಕ್ಕಾಲ್‌ನ ನಿರ್ಜನ ಪ್ರದೇಶದಲ್ಲಿ ಅಪರಿಚಿತ ಕಾರು ಪತ್ತೆಯಾಗಿದ್ದು, ತನಿಖೆ ನಡೆಯುತ್ತಿದೆ. ಕೇರಳ ನೋಂದಾವಣೆಯ ಈ ಕಾರು ಕೆಲವು ದಿನಗಳ ಹಿಂದೆಯೇ ನಿರ್ಜನ ಪ್ರದೇಶ ದಲ್ಲಿ ಕಂಡುಬಂದಿತ್ತು. ಆದರೆ ಸ್ಥಳೀಯರು ಇದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ . ಈ ನಡುವೆ ಚಿಮೇನಿಯಲ್ಲಿ ಮೂರು ವಾರಗಳ ಹಿಂದೆ ಜಾನಕಿ ಎಂಬವರನ್ನು ಕತ್ತು ಸೀಳಿ ಕೊಲೆಗೈದು ನಗದು ದರೋಡೆ ನಡೆಸಿದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಶಂಕಿತ ಕಾರಿನ ಬಗ್ಗೆ ಮಾಹಿತಿ ಲಭಿಸಿದ್ದು , ಇದರಂತೆ ಕಾರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ ಕಾರಿನ ವಾರೀಸುದಾರರಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಜಾನಕಿ ಕೊಲೆ ಪ್ರಕರಣ ನಡೆದು ವಾರಗಳು ಕಳೆದರೂ ಇನ್ನೂ ಆರೋಪಿಗಳ ಬಗ್ಗೆ ಸುಳಿವು ಲಭಿಸಿಲ್ಲ.