News

ಕಾಸರಗೋಡು: ಮಂಜೇಶ್ವರ ಚರ್ಚ್ ದಾಳಿ ಪ್ರಕರಣ-ಒತ್ತಡಕ್ಕೆ ಮಣಿಯದೆ ತನಿಖೆಗೆ ಸಂಸದ ಉಣ್ಣಿತ್ತಾನ್ ಸೂಚನೆ

ಕಾಸರಗೋಡು, ಆ 22(DaijiworldNews/SM): ನಾಲ್ಕು ದಿನಗಳ ಹಿಂದೆ ದುಷ್ಕರ್ಮಿಗಳು ದಾಳಿ ನಡೆಸಿದ ಮಂಜೇಶ್ವರ ಚರ್ಚ್ ಗೆ ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಗುರುವಾರದಂದು ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಚರ್ಚ್ ನ ಧರ್ಮಗುರು ಫಾದರ್ ವಿನ್ಸೆಂಟ್ ಸಲ್ಡಾನ್ಹಾ ರವರಿಂದ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಎಲ್ಲಾ ರೀತಿಯ ಬೆಂಬಲ ನೀಡಲಾಗುವುದು. ಯಾವುದೇ ಮಾಫಿಯಾಕ್ಕೆ ಅವಕಾಶ ನೀಡಲಾಗದು. ನಿಸ್ಪಕ್ಷಪಾತವಾಗಿ ತನಿಖೇ ನಡೆಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದಂತೆ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ. ಯಾವುದೇ ಬೆದರಿಕೆಗೆ ಬಗ್ಗಬೇಕಿಲ್ಲ. ಸಂಸದನಾಗಿ ನಿಮ್ಮ ಬೆಂಬಲಕ್ಕೆ ನಾನು ಸದಾ ಸಿದ್ದ ಎಂದರು.

ಸಂಸದರ ಜೊತೆ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ. ಅಶ್ರಫ್, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್, ಗ್ರಾಮ ಪ೦ಚಾಯತ್ ಅಧ್ಯಕ್ಷ ಅಬ್ದುಲ್ ಅಜೀಜ್ ಮೊದಲಾದವರು ಉಪಸ್ಥಿತರಿದ್ದರು.