News

ವಿಟ್ಲ: ಹಿಂಬಾಗಿಲು ಮುರಿದು ಅಕ್ಕಿ ಡಬ್ಬದಲ್ಲಿದ್ದ 44 ಪವನ್ ಚಿನ್ನ ಕದ್ದ ಕಳ್ಳರು.!


ವಿಟ್ಲ  ಡಿ 7 : ಹಿಂಬಾಗಿಲು ಮುರಿದು ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿರುವ ಘಟನೆ ವಿಟ್ಲದ ಉಕ್ಕಡದಲ್ಲಿ ಡಿ 7 ರ ಬುಧವಾರ ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ಸಂದರ್ಭಕ್ಕೆ ಹೊಂಚುಹಾಕಿ ಒಳನುಗ್ಗಿದ ಕಳ್ಳರು ಸುಮಾರು 44 ಪವನ್ ಚಿನ್ನಭರಣ ಕದ್ದೊಯ್ದಿದ್ದಾರೆ. ಉಕ್ಕುಡದ ಅಬ್ಬಾಸ್ ಹಾಜಿ ಎಂಬವರ ಮನೆಯಲ್ಲಿ ಈ ಕೃತ್ಯ ನಡೆದಿದ್ದು ಮನೆಯಲ್ಲಿರುವ ಕಪಾಟುಗಳನ್ನು ಶೋಧಿಸಿದೆ ಅಡುಗೆ ಮನೆಯಲ್ಲಿ ಇಡಲಾಗಿದ್ದ ಅಕ್ಕಿ ಡಬ್ಬದೊಳಗೆ ಇಟ್ಟಿದ್ದ 44 ಪವನ್ ಚಿನ್ನವನ್ನು ದೋಚಿದ್ದು ಸಂಶಯಕ್ಕೆ ಕಾರಣವಾಗಿದೆ. ಈ ಕಳವು ಕೃತ್ಯದ ಹಿಂದೆ ಪರಿಚಿತರು ಇರುಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಂತ್ರಜ್ಞರು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಕುರಿತಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.