News

ರಾಮನಿಗೆ ಬೇಕಾದಾಗ ಮಂದಿರ ನಿರ್ಮಿಸುತ್ತೇವೆ ಮೋದಿಗೆ ಬೇಕಾದಾಗ ಅಲ್ಲ: ಸಿಬಲ್ ತಿರುಗೇಟು


ನವದೆಹಲಿ ಡಿ 6 : ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ವಿವಾದಕ್ಕೆ ಕಪಿಲ್ ಸಿಬಲ್ ತಿರುಗೇಟು ನೀಡಿದ್ದಾರೆ. ರಾಮ ಮಂದಿರವನ್ನು ನಾವು ರಾಮನಿಗೆ ಯಾವಾಗ ಬೇಕೋ ಆಗ ನಿರ್ಮಿಸುತ್ತೇವೆ ಪ್ರಧಾನಿ ಮೋದಿ ಅವರಿಗೆ ಬೇಕಾದಾಗ ಅಲ್ಲ, ನಾವು ಭಗವಂತನಾದ ರಾಮನನ್ನು ನಂಬಿದ್ದೇವೆ, ಬದಲು ಮೋದಿಯನ್ನಲ್ಲ , ಮಂದಿರವನ್ನು ನಾವು ನಿರ್ಮಿಸುವುದಿಲ್ಲ ಅಥವಾ ಮಂದಿರ ನಿರ್ಮಿಸುತ್ತೇವೆ ಅಂದುಕೊಂಡರೆ ತಪ್ಪು ತಿಳುವಳಿಕೆ ನಿಮ್ಮದು ಎಂದು ಕಪಿಲ್ ಸಿಬಲ್ ಪ್ರಧಾನಿಗೆ ಹೇಳಿದ್ದಾರೆ. ಮೋದಿಯವರೇ ಮಂದಿರ ಎಲ್ಲಿ ನಿರ್ಮಿಸಬೇಕು ಮತ್ತು ಯಾವಾಗ ನಿರ್ಮಿಸಬೇಕು ಎಂದು ಶ್ರೀ ರಾಮನ ಮೂಲಕ ಸಮಯವೇ ನಮಗೆ ಸೂಚಿಸುತ್ತದೆ ಎಂದು ಸಿಬಿಲ್ ಹೇಳಿದ್ದಾರೆ. ಆಯೋದ್ಯೆ ಪ್ರಕರಣದ ಕುರಿತು ಸುನ್ನಿ ವಕ್ಫ್ ಬೋರ್ಡ್ ನ್ನು ಪ್ರತಿನಿಧಿಸುತ್ತಿರುವ ಕಪಿಲ್ ಸಿಬಲ್ ಅಂತಿಮ ತೀರ್ಪನ್ನು 2019 ರ ಸಾರ್ವತ್ರಿಕ ಲೋಕಸಭೆ ಚುನಾವಣೆ ಬಳಿಕ ಪ್ರಕಟಿಸಬೇಕೆಂದು ಕೋರ್ಟ್ ಗೆ ಮನವಿ ಮಾಡಿದ್ದರು. ಇದಕ್ಕೆ ಸುನ್ನಿ ವಕ್ಫ್ ಬೋರ್ಡ್ ಆಕ್ಷೇಪ ವ್ಯಕ್ತಪಡಿಸಿತ್ತು, ಆದರೆ ಈ ನಡೆಯನ್ನು ಪ್ರದಾನಿ ಮಾತ್ರ ಮುಕ್ತ ಕಂಠದಿಂದ ಶ್ಲಾಘಿಸಿದ್ದರು.