News

ನಂತೂರು: ಬಸ್ ಲಾರಿ ಡಿಕ್ಕಿ-15 ಕ್ಕೂ ಹೆಚ್ಚು ಜನರಿಗೆ ಗಾಯ

 

ಮಂಗಳೂರು ಡಿ 7:  ಅತಿವೇಗದಲ್ಲಿ ಬಂದ ಬಸ್ಸೊಂದು ಲಾರಿಗೆ ಗುದ್ದಿದ ಪರಿಣಾಮ ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ನಗರದ ನಂತೂರಿನಲ್ಲಿ ಡಿ 7 ರ ಗುರುವಾರ ಬೆಳಗ್ಗೆ ಸುಮಾರು 7.35 ಕ್ಕೆ ನಡೆದಿದೆ. ಅಪಘಾತದ ರಭಸಕ್ಕೆ ಬಸ್ ನಲ್ಲಿದ್ದ ಪ್ರಯಾಣಿಕರಾದ ಕವಿತಾ (45 ವರ್ಷ) ಸಾವನ್ನಪ್ಪಿದ್ದಾರೆ , ಇವರು ಲೇಡಿಗೋಷನ್ ಆಸ್ಪತ್ರೆಯಲ್ಲಿ ಆಯಾ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇವರು ಗುರುಪುರ ಕೈಕಂಬ ನಿವಾಸಿಯಾಗಿದ್ದಾರೆ .

ಬಿಕರ್ನಕಟ್ಟೆ ಕಡೆಯಿಂದ ಬರುತ್ತಿದ್ದ ಪಿಟಿಸಿ ಬಸ್ ಅತಿ ವೇಗದಲ್ಲಿ ಬಂದು ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರಿಯ ನಿಯಂತ್ರಣ ತಪ್ಪಿ ಪಕ್ಕದಲ್ಲೇ ಚಲಿಸುತ್ತಿದ್ದ ಕಾರ್ ಗೆ ಗುದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬಸ್ಸಿನಲ್ಲಿ ಸುಮಾರು 15 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು . ಕದ್ರಿ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.