News

ಅಮಿತ್ ಷಾ ರಾಜ್ಯಕ್ಕೆ ನಿರ್ಭಂದಿಸುವ ಆಲೋಚನೆ ಇಲ್ಲ - ಗೃಹ ಸಚಿವ ರಾಮಲಿಂಗಾ ರೆಡ್ಡಿ

 

ಬೆಂಗಳೂರು ಡಿ 06:  ಬಿಜೆಪಿ ಅಧ್ಯಕ್ಷ ಅಮಿತ್ ಷಾ ರಾಜ್ಯಕ್ಕೆ ಆಗಮಿಸದಂತೆ ನಿರ್ಬಂಧ ವಿಧಿಸುವ ಆಲೋಚನೆ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಬುಧವಾರ ಸ್ಪಷ್ಟಪಡಿಸಿದ್ದಾರೆ.ಈ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಅಮಿತ್ ಷಾ ತಮ್ಮ ಭಾಷಣದ ಮೇಲೆ ಮೊದಲು ಹಿಡಿತ ಸಾಧಿಸಬೇಕು. ಇತ್ತೀಚೆಗೆ ಹುಣಸೂರಿನಲ್ಲಿ ಬಿಜೆಪಿ ಮಾಡಿದ ರಾದ್ಧಾಂತದ ಬಳಿಕ ಸಂಸದ ಪ್ರತಾಪ್ ಸಿಂಹ ನಾವು ಅಮಿತ್ ಷಾ ಮಾತಿನಂತೆ ನಡೆಯುತ್ತಿದ್ದೇವೆ ಅಂದಿದ್ದಾರೆ. ಈ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡಾ ಆಗಿದೆ. ಅದ್ದರಿಂದ ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯಾಗಿ ಅಮಿತ್ ಷಾ ಪ್ರಚೋದಿಸುವ ಕೆಲಸಗಳನ್ನು ಮಾಡುವುದು ಸಲ್ಲದು ಮೊದಲು ಅವರು ಸರಿಯಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪ್ರತಾಪ್ ಸಿಂಹ ಅವರ ವಿರುದ್ದ ವಾಗ್ದಾಳಿ ನಡೆಸಿ ಹುಣಸೂರಿನಲ್ಲಿ ಅನವಶ್ಯಕ ಶಾಂತಿ ಭಂಗ ತರುವ ಕೆಲಸ ಮಾಡಿದ ಸಂಸದರು ಸಮಾಜದಲ್ಲಿ ಜವಬ್ದಾರಿಯುತವಾಗಿ ವರ್ತಿಸುವುದನ್ನು ಕಲಿಯಿರಿ. ಕೇವಲ ಮತಬ್ಯಾಂಕ್ ನ್ನು ಹಿಡಿತದಲ್ಲಿಟ್ಟುಕೊಳ್ಳಲು ಅನವಶ್ಯಕ ಗಲಾಟೆ ಮಾಡುವುದು ಎಷ್ಟು ಸರಿ ಎಂದು ಕಿಡಿಕಾರಿದರು.